ನಮ್ಮ ಬಗ್ಗೆ

ಜಾತಿಯು 2500 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಸಾಮಾಜಿಕ ಸಮಸ್ಯೆಯಾಗಿದ್ದು, ಮನುಷ್ಯ ಮನುಷ್ಯರ ನಡುವೆ , ಗಂಡು ಹೆಣ್ಣಿನ ನಡುವೆ ಅಸಮಾನತೆಯನ್ನ ಸೃಷ್ಟಿಸಿ, ಇನ್ನೂ ಅದು ಜನರನ್ನು ದಮನಿಸುತ್ತಿದೆ ಮತ್ತು ಸಾಮಾಜಿಕ ಶ್ರೇಣಿ ಮತ್ತು ಅಸಮಾನತೆಗಳನ್ನು ಉಳಿಸಿಕೊಳ್ಳುವ ಕಟ್ಟುನಿಟ್ಟಿನ ಮೂಲದೊಂದಿಗೆ ಅದು ಹಲವು ರೂಪಗಳನ್ನು ಪಡೆಯುತ್ತಿದೆ.

ಬುದ್ಧರಿಂದ ಅಂಬೇಡ್ಕರ್ ವರೆಗೆ ಅನೇಕ ಜಾತಿ ವಿರೋಧಿ ಬುದ್ಧಿಜೀವಿಗಳು ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದರು ಮತ್ತು ಅವರ ಕಾಲದ ಜಾತಿಯ ತಿಳುವಳಿಕೆಯನ್ನು ನಮಗೆ ನೀಡಿದರು. ಅನೇಕ ಜನರು ಜಾತಿಯನ್ನು ಆಚರಣೆಗಳ ವಿಷಯ ಮತ್ತು  ಹಳ್ಳಿಯ ಜನರ ಸಮಸ್ಯೆ ಎಂದು ಭಾವಿಸುತ್ತಾರೆ ಆದರೆ ಜಾತಿಯು ನಮ್ಮ ಭೂಮಿ, ಆಹಾರ, ಭಾಷೆ, ಬಣ್ಣ,ನಾವು ಯೋಚಿಸುವ ರೀತಿ ಇತ್ಯಾದಿಗಳೊಂದಿಗೆ ಬೆರೆತುಹೋಗಿದೆ, ಆದ್ದರಿಂದ ಜಾತಿಯನ್ನು ಆಹಾರ, ಭೂಮಿ, ಹಣ, ಭಾಷೆ, ಪ್ರದೇಶ, ಆರ್ಥಿಕತೆ ಇತ್ಯಾದಿಗಳೊಂದಿಗೆ ಅರ್ಥಮಾಡಿಕೊಳ್ಳಲು ಇದು ಸರಿಯಾದ ಸಮಯವಾಗಿದೆ.

ದಲಿತ, , ಅಲ್ಪಸಂಖ್ಯಾತ, ಕ್ವೀರ್ ಬುಡಕಟ್ಟು ಶೋಷಿತ ಜನರ ಅಸ್ತಿತ್ವ ಮತ್ತು ಸಮಸ್ಯೆಗಳ ಬಗ್ಗೆ  ಧ್ವನಿ ಎತ್ತುವಲ್ಲಿ ಮಾದ್ಯಮಗಳು ನೈತಿಕತೆಯನ್ನು ಕಳೆದುಕೊಂಡಿರುವ ಈ ಸಮಯದಲ್ಲಿ , ಧ್ವನಿಯಡಗಿಸಲ್ಪಟ್ಟಿರುವ ಜನರು, ಮಹಿಳೆಯರು, ಕಾರ್ಯಕರ್ತರು ಮತ್ತು ಜಾತಿ ವಿರೋಧಿ ಮನಸ್ಸುಗಳಿಗೆ ಒಂದು ವೇದಿಕೆಯನ್ನು ಒದಗಿಸುವುದು ಬ್ಲೂಪೆನ್ ಉದ್ದೇಶವಾಗಿದೆ, ಇಲ್ಲಿ ಅವರು ತಮ್ಮ ಆಲೋಚನೆಗಳು, ಸಮಸ್ಯೆಗಳು , ಚಿಂತನೆಗಳು ಮತ್ತು ಹೋರಾಟಗಳನ್ನು ಬರವಣಿಗೆ, ಕಲೆ ಮತ್ತು ಕಾವ್ಯದ ಮೂಲಕ ಹಂಚಿಕೊಳ್ಳಬಹುದು ಮತ್ತು ವ್ಯಕ್ತಪಡಿಸಬಹುದು ಮತ್ತು ಇದು ಅನೇಕ ಬುದ್ಧಿಜೀವಿಗಳು, ಶಿಕ್ಷಣ ತಜ್ಞರಿಗೆ, ಜನ ಸಾಮಾನ್ಯರಿಗೆ ಸಂಪನ್ಮೂಲ ಸಾಮಗ್ರಿಯಾಗಿರುತ್ತದೆ.