ಇರಬೇಕು ನಿನ್ನಂತೆ

ಇರಬೇಕು ನಿನ್ನಂತೆ ಬಡಿದಷ್ಟು ಗಡುಸಂತೆ
ಬಡಿದರು ನಿನ್ನನ್ನು ಅವರವರ ತೋಳ್ಬಲಕೆ ತಕ್ಕಂತೆ
ನೀ ನಿಂತೆ ಧೃಡವಾಗಿ ಕದಲದಾ ರವಿಯಂತೆ

ಹುಟ್ಟುತಾ ಕೀಳೆಂದು ಜರಿದು ಜಗ್ಗಿದಾ ಜನಕೆ
ಹುಟ್ಟಿದ್ದೇ ನಿಮಗೆಂದು ಬದುಕಿ ತೋರಿದೆ ಜಗಕೆ

ಅಕ್ಷರಗಳೇ ಕಾದ ಸೀಸವಾಗಿಹ ನಮಗೆ
ಹುಲಿಯ ಹಾಲಿದು ಕುಡಿದು ಘರ್ಜಿಸಿರಿ ಎಂದೆ

ಹೆಣ್ಮನಗಳು ಕೊರಗಿ ಸೊರಟು ಹೋಗಿರುವ ಕಾಲಕ್ಕೆ
ಅಭಿವೃದ್ಧಿ ಅಳೆಯಲು ಹೆಣ್ಣಿನ ಸ್ಥಾನವೇ ಮೊದಲೆಂದೆ

ಕಷ್ಟಗಳ ಒದೆಯುತ್ತ, ಅವಮಾನ ಮೆಟ್ಟುತ್ತಾ ಓದುತ್ತ ನಡೆದೆ
ಜ್ಞಾನವೇ ಶರಣಾಗಿ ವಿಶ್ವ ಜ್ಞಾನದಾ ದಿನವಾದೆ

ನೀ ಬರೆದ ಲೇಖನಕೆ ದೇಶದ ಆರ್ಥಿಕತೆ ಬದಲಾಯ್ತು
ನೀಡಿದಾ ಸಲಹೆಗೆ ದೇಶದಲಿ ನೀರಾವರಿ ಮೊದಲಾಯ್ತು

ಶತಮಾನಗಳ ದಾಷ್ಟ್ಯ ನುಂಗಿ ಕ್ಷಮಿಸಿದ್ದ ಜನತೆ
ಎದೆಯೇರಿಸಿ ಸೆಟೆದು ನಿಂತಿತು ನೀ ಘೀಳಿಟ್ಟ ಸ್ವರಕೆ

ಮೂರು ಶತಕಗಳ ಕಾಲ ತಡಕಿದರೂ ಸಿಗಲ್ಲಿಲ್ಲ ನಿನ್ನಂತೆ ಇನ್ನೊಬ್ಬ
ನೀ ನಿಂತೆ ಮಾನವತೆಯ ಶಿಲೆಯಾಗಿ ಜಗದ ವಿಶ್ವವಿದ್ಯಾಲಯ ಮುಂಭಾಗ

ಅಸ್ಪೃಶ್ಯ ನೀನಂದು ಎಲ್ಲರಾ ಬಾಯಲ್ಲಿ
ಅವರದೇ ಬಾಯಲ್ಲಿ ನೀನಿಂದು ಅವತಾರ ಪುರುಷ

ಸೂರ್ಯ ಕಿರಣ

ಹೊಸ ಬರಹಗಳು

ಕವನಗಳು

ಇರಬೇಕು ನಿನ್ನಂತೆ

ಕವನಗಳು

ನೀ ಇರಲಿಲ್ಲದಿದ್ದಿದ್ದರೆ?

ಕವನಗಳು

ಕಾಣದಾದೆ ನಿಮ್ಮೊಳಗಿನ ಮೃಗವ…

ಕವನಗಳು

ಎಷ್ಟೊಂದು ಕಾಳಜಿ..!?

ಕವನಗಳು

ಪುರಾವೆ

ಕವನಗಳು

ಪ್ರೀತಿಗಾಗಿ ಬೇಡಬೇಕೂ

ನೋಟಗಳು

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?