ನೀ ಇರಲಿಲ್ಲದಿದ್ದಿದ್ದರೆ?

ನೀ ಇರಲಿಲ್ಲದಿದ್ದಿದ್ದರೆ?
ಇಂದು ನನ್ನ ಬಾಯ ಕೆಳಗೆ ಆಧುನಿಕ ಪ್ಲಾಸ್ಟಿಕ್ಕಿನ ಬಟ್ಟಲೊಂದು ಜೋತು ಬಿದ್ದಿರುತ್ತಿತ್ತು…

ನೀ ಇರಲಿಲ್ಲದಿದ್ದಿದ್ದರೆ?
ನನ್ನ ಸೊಂಟಕ್ಕೆ ಪೊರಕೆಯೊಂದು ಗಂಟು ಬಿದ್ದು ನನ್ನ ಹೆಜ್ಜೆಗಳನ್ನೆಲ್ಲಾ ಅಳಿಸಿ ಹಾಕುತ್ತಿತ್ತು…

ನೀ ಇರಲಿಲ್ಲದಿದ್ದಿದ್ದರೆ ?
ನಾ ಮಾತನಾಡಿದಾಗ ಹೊರಬರುವ ನಾಲಿಗೆ ಮಾತನಾಡಿದರೂ ಹೊರಬಾರದಷ್ಟು ಜಾತಿ ರಾಕ್ಷಸರ ಕತ್ತಿಗೆ ತುಂಡರಿಸಿ ಬಿದ್ದಿರುತ್ತಿತ್ತು…

ನೀ ಇರಲಿಲ್ಲದಿದ್ದಿದ್ದರೆ?
ಮೇಲ್ಜಾತಿಯವರು ಮಾಡಿದ ಹೇಸಿಗೆಯ ಬಾಚುತ್ತಾ, ಜೀವನ ಪೂರ್ತಿ ಹೇಸಿಗೆ ಅಂಟಿಕೊಂಡೇ ಬದುಕಬೇಕಿತ್ತು.

ನೀ ಇರಲಿಲ್ಲದಿದ್ದಿದ್ದರೆ?
ಶಾಲೆಯ ಕೋಣೆಯ ಹೊರಗೆ ಅವಮಾನದ ಚೀಲ ಹೊತ್ತು ನಿಂತೇ ಇರುತ್ತಿದೆ…

ನೀ ಇರಲಿಲ್ಲದಿದ್ದಿದ್ದರೆ?
ಛೀ, ಥೂ ದೂರ ನಿಲ್ಲು, ಅದು ಮುಟ್ಟಬೇಡ, ಇದು ಮುಟ್ಟಬೇಡ, ಇಲ್ಲಿ ನಿಂತವರಿಗೆ ಪ್ರವೇಶವಿಲ್ಲಾ ಎಂಬ ಚುಚ್ಚು ಮಾತುಗಳು ಕಿವಿಯ ಟಮಟೆಯನ್ನು ಚುಚ್ಚುತ್ತಲೇ ಇರುತ್ತಿದ್ದವು…

ನೀ ಇರಲಿಲ್ಲದಿದ್ದಿದ್ದರೆ?
ಬದುಕಿಗಿಂತ ಸಾವೇ ಸ್ವರ್ಗ ಎನಿಸುವಷ್ಟು ರೋಸಿಹೋಗುವ ಜೀವದಲ್ಲಿ ಸಾವಿಗಾಗಿ ಎದುರು ನೋಡುತ್ತಲೇ ಇರುತ್ತಿದ್ದೆ…

ನೀ ಇರಲಿಲ್ಲದಿದ್ದಿದ್ದರೆ?
ಹೆಣ್ಣಾಗಿ ನನಗೆ ಸೂರಿಲ್ಲದ, ಘನತೆ ಬದುಕಿಲ್ಲದೆ, ಕಸ ಮುಸುರೆ ತಿಕ್ಕುವ ಮನೆ ಕೆಲಸದವಳಾಗಿಯೇ ನಮ್ಮದೇ ಮನೆಯ ಗುಲಾಮಲಾಗಿಯೇ ಜೀವನ ಸವೆಸಿಬಿಡುತ್ತಿದೆ.

ನೀ ಇರಲಿಲ್ಲದಿದ್ದಿದ್ದರೆ ?
ಮೇಲ್ಜಾತಿಯ ಅಮಾನವೀಯ ಕ್ರೌರ್ಯದ ಬೂಟುಗಳ ಹೊಡೆತಕ್ಕೆ ಬೀದಿ ಬೀದಿಯಲ್ಲಿ ಹೆಣವಾಗಿಬಿಡುತ್ತಿದೆ…

ಆದರೆ
ಇಂದು ನೀ ನಮ್ಮೊಂದಿಗೆ…
ಇವೆಲ್ಲವುಗಳಿಂದ ಮುಕ್ತಿ ಬೇಕೆಂದು ಸಾರಿದವ,
ಸಮಾನತೆ, ಸ್ವತಂತ್ರ್ಯ ಘನತೆಯ ಬದುಕು ತೋರಿಸಿಕೊಟ್ಟವ, ಶಿಕ್ಷಣ, ಹೋರಾಟ, ಸಂಘಟನೆಯ ಬೆಳಕನ್ನು ತೋರಿಸಿದವ ನೀ ನಮ್ಮ ಭೀಮ…

ಜೈ ಭೀಮ್

– ಅಂಬಿಕಾ. ಎಮ್

ಹೊಸ ಬರಹಗಳು

ಕವನಗಳು

ಇರಬೇಕು ನಿನ್ನಂತೆ

ಕವನಗಳು

ನೀ ಇರಲಿಲ್ಲದಿದ್ದಿದ್ದರೆ?

ಕವನಗಳು

ಕಾಣದಾದೆ ನಿಮ್ಮೊಳಗಿನ ಮೃಗವ…

ಕವನಗಳು

ಎಷ್ಟೊಂದು ಕಾಳಜಿ..!?

ಕವನಗಳು

ಪುರಾವೆ

ಕವನಗಳು

ಪ್ರೀತಿಗಾಗಿ ಬೇಡಬೇಕೂ

ನೋಟಗಳು

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?